Markdown Cheat Sheet

Headlines
# Headline 1
## Headline 2
### Headline 3

Styling
*italic*
**bold**
~~strike through~~

Links
http://url.com
[link text](http://www.url.com)

Quotes
> Quote text
***Johnny Author***

Images
![image alt text](image url)
***Image caption, description***

Horizontal rule
---

Inline Code
`var name = "John Doe";`

Code block with syntax highlighting
``` codelanguage
function foo() {
  return bar;
}
```

Bulleted list
- item 1
- item 2
- item 3

Numbered list
1. item 1
2. item 2
3. item 3

The literary odyssey of Sri P. Ramakrishna Shastri: nurturing Kannada language and culture

A six-decade journey of writing, farming, and advocacy, inspiring generations to preserve Kannada heritage

Read this article in English

ಪ.ರಾ.ಶಾಸ್ತ್ರಿ - ಬರವಣಿಗೆಯ ಮೌಲ್ಯ ಹೆಚ್ಚಿಸಿದ ಬರಹಗಾರ

ಕನ್ನಡ ನಾಡಿನ ವಿವಿಧ ಪತ್ರಿಕೆಗಳಿಗೆ ಹನ್ನೆರೆಡು ಸಾವಿರಕ್ಕೂ ಅಧಿಕ ಲೇಖನಗಳನ್ನು ನೀಡಿ, ನೂರಕ್ಕೂ ಅಧಿಕ ಕೃತಿಗಳಿಗೆ ಕರ್ತೃವೆನಿಸಿ, ಸತತವಾಗಿ ಆರು ದಶಕಗಳ ಕಾಲ ಸಾಹಿತ್ಯ ಸೇವೆಗೈದಿರುವ ನಾಡಿನ ಜೀವಂತ ಜ್ಞಾನ ಭಂಡಾರ ಶ್ರೀ ಪ.ರಾಮಕೃಷ್ಣ ಶಾಸ್ತ್ರಿ ಎನ್ನಬಹುದು. ತಮ್ಮ ಬದುಕಿನುದ್ದಕ್ಕೂ ಕಾಯಕತೆಯಲ್ಲಿ ಸ್ಪಷ್ಟತೆ ಮತ್ತು ನಿರಂತರತೆಯನ್ನು ಕಾಯ್ದುಕೊಂಡು ಹೋಗಿರುವ ಅವರು, ಇಂದಿಗೂ ಸಾಹಿತ್ಯ ಸೇವಾ ತತ್ಪರರಾಗಿದ್ದಾರೆ. ಬದುಕಿನ ಆರಂಭದಿಂದಲೂ ನಿಸರ್ಗದೊಟ್ಟಿಗೆ, ಸ್ಥಳೀಯ ಕೃಷಿ ಸಂಸ್ಕೃತಿಯೊಟ್ಟಿಗೆ ತಮ್ಮ ಅನುಬಂಧವನ್ನು ಅಷ್ಟೇ ಧೃಢವಾಗಿಟ್ಟುಕೊಂಡಿರುವ ಅವರಿಗೆ ವಿಷಯಕೊರತೆಯೆಂಬುದು ಎಂದಿಗೂ ಕಂಡುಬರಲಿಲ್ಲ. ಒಂದೆಡೆ ಬಾಲ್ಯದಲ್ಲಿ ಓದಿದ್ದ ಪತ್ರಿಕೆಗಳು, ಪುರಾಣ ಕಥೆಗಳು, ಸಾಹಿತ್ಯ ಮನದಲ್ಲಿದ್ದರೆ ಬಾಳಿನಲ್ಲೆದುರಾಗುವ ಪ್ರತೀ ಹಂತದಲ್ಲೂ ಪ್ರಾಯೋಗಿಕವಾಗಿ ತಮ್ಮ ಜ್ಞಾನವನ್ನು ಪರಿಸ್ಥಿತಿಯೊಡನೆ ಅನುಸಂಧಾನ ಮಾಡಬಲ್ಲ ಸಾಮರ್ಥ್ಯ ಅವರಿಗೆ ದೈವದತ್ತವಾಗಿ ಒದಗಿ ಬಂದಿದೆ. ಹೀಗಾಗಿಯೇ ಎಂತಹ ಸಂದಿಗ್ಧ ಸನ್ನಿವೇಶದಲ್ಲೂ ಅವರು ಎದೆಗುಂದಲಿಲ್ಲ. ಬರಹಗಾರನೋರ್ವನ ಬರಹಕ್ಕೆ ತೂಕ ಬರುವುದೇ ಅದರಲ್ಲಿನ ವಿಚಾರಗಳ ಅನುಷ್ಠಾನದಲ್ಲಿ. ಪ.ರಾ. ಶಾಸ್ತ್ರೀಯವರು ತಮ್ಮ ಬರವಣಿಗೆಯ ಯಾನದುದ್ದಕ್ಕೂ ಕೃಷಿ ಸಂಬಂಧಿತ ವಿಚಾರಗಳ, ಸಮಸ್ಯೆಯ ಉಲ್ಲೇಖವನ್ನು ಮಾಡುತ್ತಾ, ಸಂಬಂಧಪಟ್ಟ ವ್ಯಕ್ತಿಗಳಿಗೆ ವಿಷಯವನ್ನು ಮುಟ್ಟಿಸುತ್ತ, ಅದರ ಪರಿಣಾಮವನ್ನು ಸಂಪೂರ್ಣವಾಗಿ ಕಾಣದ ಹೊರತು ಸುಮ್ಮನಿದ್ದವರಲ್ಲ ಎಂದು ತೋರುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ಸಿನಲ್ಲಿ ತಾವೂ ಪಾಲ್ಗೊಂಡಿರುವ ಸಂತಸವನ್ನು ಅವರಲ್ಲಿ ಇಂದಿಗೂ ಕಾಣಬಹುದಾಗಿದೆ.

ಅವರೇ ಹಂಚಿಕೊಂಡಿರುವ ಅವರ ಬದುಕಿನ ಅಮೂಲ್ಯ ಕ್ಷಣಗಳು ಇಂತಿವೆ.

ಅವರು ಬರೆದಿದ್ದ ಮೂವತ್ತೇಳು ಪೈಸೆ ಎಂಬ ಕಥೆ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರಕ್ಕೆ ಆಯ್ಕೆಯಾದಾಗ ಅವರ ಮನೆಯಲ್ಲಿ ರೇಡಿಯೋ ಇರಲಿಲ್ಲವಂತೆ. ಆಗ ಪಕ್ಕದ ಮನೆಯವರ ಬಳಿ ಇರುವ ಟ್ರಾನ್ಸ್ಸಿಸ್ಟೆರ್ ತಂದು ಮನೆಯವರಿಗೆಲ್ಲ ಕೇಳಿಸುವ ಸಂಭ್ರಮದಲ್ಲಿದ್ದ ಅವರಿಗೆ ಪಕ್ಕದಮನೆಯವರ ಸಹಕಾರ ದೊರೆಯಲಿಲ್ಲ. ಇವರ ಮೇಲಿನ ಈರ್ಷ್ಯೆಯ ಕಾರಣದಿಂದ ಸಹಾಯ ಮಾಡಿರಲಿಲ್ಲವಂತೆ. ಆದರೂ ಛಲಬಿಡದೆ ಮುಂದೊಮ್ಮೆ ಲಾಟರಿ ಟಿಕೆಟ್ ನಲ್ಲಿಯಾದರೂ ರೇಡಿಯೋ ಭಾಗ್ಯ ಲಭಿಸಬಹುದೇ ಎಂದು ಪ್ರಯತ್ನಿಸಿದರು. ಆಗಲೂ ಅವರ ಅದೃಷ್ಟ ಫಲ ನೀಡಲಿಲ್ಲ. ಕೊನೆಗೆ ತಾವೇ ದುಡಿದ ಹಣದಿಂದ ಮುಂದೊಮ್ಮೆ ರೇಡಿಯೋ ಕೊಂಡಾಗ ಅವರಿಗಾದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೀಗಾಗಿಯೇ ನಿರಂತರ ಪ್ರಯತ್ನದಲ್ಲಿ ಪರಮಾರ್ಥವನ್ನು ಕಂಡವರೆನ್ನಬಹುದು.

ಮೊಟ್ಟಮೊದಲ ಬಾರಿ ಕ್ಯಾಮೆರಾ ಕೊಂಡಾಗ ದೇವಸ್ಥಾನಗಳ ಕುರಿತು ಬರೆಯಬಹುದೆಂದು ಅವರಿಗೆ ಅನ್ನಿಸಿತ್ತು. ಹೇಗೋ 48 ರೂಪಾಯಿ ಹೊಂದಿಸಿ, ಕ್ಯಾಮೆರಾ ತಂದರೂ ಹೆಚ್ಚಿನ ಫೋಟೋಗಳು ಅಲುಗಾಟದಿಂದ ನಿಷ್ಫಲವಾಗುತ್ತಿದ್ದವಂತೆ. ಒಂದೆರೆಡು ಬಾರಿ ರೀಲಿನ ಮೇಲೆ ಸೂರ್ಯನ ಬೆಳಕು ಬಿದ್ದು ವ್ಯರ್ಥವಾಯಿತಂತೆ. ಕೊನೆಗೆ ಒಂದೇ ಒಂದು ಉಪ್ಪಿನಂಗಡಿಯ ದೇಗುಲದ ಫೋಟೋ ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರಕಟವಾಯಿತಂತೆ. ತದನಂತರ ಅನಿವಾರ್ಯವಾಗಿ ಅಂಗಡಿಯವರಿಗೆ ತಲುಪಿಸಬೇಕಿದ್ದ 25 ರೂಪಾಯಿಯಷ್ಟು ಹಣ ತಮ್ಮಲ್ಲಿ ಇಲ್ಲದ ಕಾರಣ ಕ್ಯಾಮೆರಾ ನೀಡಿಯೇ ಹಣ ಚುಕ್ತಾ ಮಾಡಿದ್ದರಂತೆ. ಒಂದೊಮ್ಮೆ ಜೆ.ಪಿ.ರಾಜರತ್ನಂ ಅವರನ್ನು ಭೇಟಿ ಮಾಡಲು ಸಿಕ್ಕ ಅವಕಾಶವನ್ನು ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದೆಂದು  ಅವರು ಹೇಳುವರು.

ಈಗ ಅವರಿಗೆ 70 ರ ಸಂಭ್ರಮ. ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ಬರವಣಿಗೆಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಅವರು 'ಆಡು ಮುಟ್ಟದ ಗಿಡವಿಲ್ಲ' ಎಂಬಂತೆ ಎಲ್ಲ ರೀತಿಯ ವಿಷಯಗಳನ್ನು ತಮ್ಮ ಲೇಖನದ ಲೋಕದಲ್ಲಿಳಿಸಿ ಸಾಹಿತ್ಯ ತೋರಣ ಕಟ್ಟಿದ್ದಾರೆ. 21 ನೇ ಶತಮಾನದ ಕಂಪ್ಯೂಟರ್ ಮತ್ತು ಇಂಟರ್ನೆಟ್ ಕುರಿತಾದ ಕಾಲ್ಪನಿಕ ಕಥೆಗಳನ್ನು ತಮ್ಮ ಬಾಲ್ಯದಲ್ಲಿ ಕೇಳುತ್ತಿದ್ದ ಅವರಿಗೆ, ಆ ಕಲ್ಪನೆಯೇ ನೈಜವಾದಾಗಲೂ ವಿಚಲಿತರಾಗದೆ ನಿರಂತರ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಮುಂದಿನ ದಶಕಗಳಲ್ಲಿ ಕನ್ನಡ ಭಾಷೆಗೆ ಎದುರಾಗಬಹುದಾದ ಸವಾಲುಗಳ ಕುರಿತು ಸ್ಪಷ್ಟ ಅರಿವಿರುವ ಅವರು, ಭಾಷೆ ನಶಿಸಿದಲ್ಲಿ ಅದರಲ್ಲಿನ ಸಂಪೂರ್ಣ ಜ್ಞಾನವೂ ಮರೆಯಾಗುತ್ತದೆ. ಹೀಗಾಗದಿರಲು ನವಗಾಲದ ಪಾಲಕರು ತಮ್ಮ ಮಕ್ಕಳನ್ನು ಬೆಳೆಸುವ ಪರಿ, ಭಾಷೆಯೆಡೆಗೆ ಗೌರವ ನೀಡುತ ಕಲಿಸುವ ತಮ್ಮ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ. ಹೊಸಕಾಲದ ಓದುಗರನ್ನು ಹುಟ್ಟುಹಾಕುವ ಹೊಣೆ ಇಂದಿನ ಪೀಳಿಗೆಯ ಮೇಲಿದೆ ಎನ್ನುತ್ತಾರೆ. ಇಂತಹ ಅಪರೂಪದ ಪ್ರತಿಭೆಯ ಮಾತಿಗೆ ಇಂದಿನ ಪೀಳಿಗೆ ಮನ್ನಣೆ ನೀಡಬೇಕಿದೆ. ಈ ನಾಡಿನಲ್ಲಿ ಇಂತಹ ಮತ್ತಷ್ಟು ವ್ಯಕ್ತಿತ್ವಗಳುದಿಸಲಿ, ತಾಯಿ ಭುವನೇಶ್ವರಿಗೆ ಶ್ರೇಯತರಲಿ.

 

P. R. Shastri is a writer who elevated the value of writing

Sri P. Ramakrishna Shastri has worked for the literature for six decades and has written more than one hundred books in addition to more than twelve thousand articles for Kannada Newspapers and Magazines.  Throughout his life, he has kept his writing consistent and clear, and he is continuously engaged in literary service. From the beginning, his connection with nature and regional agriculture had always been strong, and he had never experienced a lack of contentment. He was endowed with the capacity to effectively apply his knowledge to the circumstances at every stage of his life. Thus, he never gave up in the face of adversity.

The quality of a writer's writing is determined by how it will actually affect society. His literary career has included discussions on agricultural topics and ideas. He actively participated in the "Dharmasthala Village Development Project" and made a significant contribution to raising awareness through his writings in order to improve the living conditions of farmers. 

These are the priceless times in his life that he shared.

Once, Bengaluru Akashavani chose to air his story, "Moovattelu Paise." He did not, however, have a radio in his house. He therefore made an effort to ask his neighbours to lend him their radio. They refused to share the radio out of jealousy. Later, he tried to purchase a lottery ticket. His good fortune was useless even then. Later, he bought one radio with his own hard-earned money. He therefore advises everyone to make their own money rather than taking on debt. 

He wanted to write about temples when he first got a camera. Even with the new camera, most of the pictures were shaky. The sunlight wasted a few times when it hit the reel. After many attempts one picture of an Uppinangadi temple came out well and got published in Vikrama Vara Patrike. Unfortunately, he was once short of 25 rupees that had to be delivered to the shopkeeper, and had to give the camera in its place.

Currently, he is celebrating his 70th birthday. Since he began writing when he was eleven years old, he has created a literary persona by incorporating a wide range of elements into his articles.  When he was younger, he used to read some fictional stories about computers and emerging technology. He has now seen the same emerge as part of reality. He was fascinated and decided to learn to use computers and all modern technology in order to write articles.

He is aware of the alarming challenges that the Kannada language may face in the coming decades. If the language perishes, the entire knowledge in it will also disappear. In order to prevent this from happening, today's parents  need to change their style of raising their children, and must give respect to their mother tongue and teaching it to them. The responsibility of creating new-age readers is on the present generation. Today's generation owes credit to such a rare talent.

Let there be more such personalities in Kannada Bhumi (Karnataka), who credit to Tayi Bhuvaneswari (Devi Bhuvaneshwari).

Do you have an article to share? Send it to aarti@languagecurry.com

 

 

 32 names of goddess Durga with meanings

Learn: the thirty-two names of Mother Durgā and their meanings

The Thirty-two names of Mother Durgā

श्रीदुर्गा-द्वात्रिंश-नाममाला

Deepawali diwali diya in flower rangoli

Deepawali or Diwali?

It is that time of the year again 🪔

The air is filled with the vibrant spirit of Deepawali. …

by Aarti Pathak
2604